`ಸಲಾರ್`ಚಿತ್ರದ ಟ್ರೈಲರ್ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಿದ ಭಾರತೀಯ ಟ್ರೈಲರ್ ಆಗಿದೆ - ಡಿ.22ರಂದು ಚಿತ್ರ ತೆರೆಗೆ
Posted date: 03 Sun, Dec 2023 � 09:08:48 AM
ಹೊಂಬಾಳೆ ಫಿಲಂಸ್ ನಿರ್ಮಾಣದ `ಸಲಾರ್: ಪಾರ್ಟ್ 1: ಸೀಸ್‍ಫೈರ್`ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಯಿತೋ, ಆಗಿನಿಂದಲೇ ಚಿತ್ರದ ಬಗ್ಗೆ, ಟ್ರೇಲರ್ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಎಲ್ಲರಲ್ಲೂ ಇತ್ತು. ಪ್ರೇಕ್ಷಕರು ಚಿತ್ರದ ಬಗ್ಗೆ ಇಟ್ಟ ನಂಬಿಕೆಯನ್ನು ಚಿತ್ರತಂಡ ಉಳಿಸಿಕೊಂಡಿದೆ. ಶುಕ್ರವಾರ ರಾತ್ರಿ 07:19ಕ್ಕೆ `ಸಲಾರ್: ಪಾರ್ಟ್ 1: ಸೀಸ್‍ಫೈರ್` ಟ್ರೇಲರ್ ಬಿಡುಗಡೆಯಾಗಿದ್ದು,  #SalaarTrailer ದಾಖಲೆ-ಮುರಿಯುವ ಮೂಲಕ YouTube ಅನ್ನು ವಶಪಡಿಸಿಕೊಂಡಿದೆ 𝟏𝟏𝟔 𝐌 𝐕𝐢𝐞𝐰𝐬 & 𝟐. 𝐮𝐫𝐬💥 ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

`ಸಲಾರ್: ಪಾರ್ಟ್ 1: ಸೀಸ್‍ಫೈರ್`ಚಿತ್ರದ ಟೀಸರ್ ನೋಡಿ ಪ್ರೇಕ್ಷಕರು ಏನು ಊಹಿಸಿದ್ದರೋ, ಅದಕ್ಕಿಂತ ದುಪ್ಪಟ್ಟಾದ ಆ್ಯಕ್ಷನ್‍, ಥ್ರಿಲ್‍ ಮತ್ತು ಕ್ರೋಧ ಈ ಟ್ರೇಲರ್ ನಲ್ಲಿದ್ದು, `ಸಲಾರ್` ಜಗತ್ತನ್ನು ಮತ್ತು ಅಲ್ಲಿನ ಪಾತ್ರಧಾರಿಗಳನ್ನು ಪರಿಚಯಿಸುವುದರ ಜೊತೆಗೆ ಚಿತ್ರದ ಮೇಲೆ ನಿರೀಕ್ಷೆಗಳನ್ನು ಹೆಚ್ಚುವಂತೆ ಮಾಡಿದೆ. ಆ್ಯಕ್ಷನ್‍ ಮತ್ತು ಮಾಸ್ ಹೀರೋ ಆಗಿ ಜನಪ್ರಿಯರಾಗಿರುವ ಪ್ರಭಾಸ್‍, ಈ ಚಿತ್ರದಲ್ಲಿ ಇನ್ನಷ್ಟು ಮಾಸ್‍ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ ಇಡೀ ಚಿತ್ರವೂ ಸಖತ್‍ ಮಾಸ್‍ ಚಿತ್ರವಾಗಿ ಹೊರಹೊಮ್ಮಿದೆ.
ಭಾರತೀಯ ಚಿತ್ರರಂಗದ ಮೂರು ಜನಪ್ರಿಯ ಹೆಸರುಗಳಾದ ಹೊಂಬಾಳೆ ಫಿಲಂಸ್‍, ಪ್ರಶಾಂತ್‍ ನೀಲ್‍ ಮತ್ತು ಪ್ರಭಾಸ್‍ ಒಟ್ಟಾಗಿ ಕೈಜೋಡಿಸಿದರೆ ಏನಾಗಬಹುದೋ ಅದೇ `ಸಲಾರ್`ಚಿತ್ರದಲ್ಲೂ ಆಗಿದೆ. ಇದೊಂದು ಅದ್ಭುತ ದೃಶ್ಯವೈಭವವಾಗಿದ್ದು, ಅತೀ ದೊಡ್ಡ ಆ್ಯಕ್ಷನ್‍ ಚಿತ್ರವಾಗಿ ಹೊರಹೊಮ್ಮಿದೆ.
 
`ಸಲಾರ್` ಚಿತ್ರದಲ್ಲಿ ಪ್ರಭಾಸ್‍, ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಹೊಂಬಾಳೆ ಫಿಲಂಸ್‍ನಡಿ ಈ ಚಿತ್ರವನ್ನು ವಿಜಯ್‍ ಕಿರಗಂದೂರು ನಿರ್ಮಿಸಿದ್ದಾರೆ. ಡಿ.22ರಂದು `ಸಲಾರ್: ಪಾರ್ಟ್ 1: ಸೀಸ್‍ಫೈರ್` ಜಗತ್ತಿನಾದ್ಯಂತ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed